ತುರುವೇಕೆರೆ: ಜೈಲಿಗಟ್ಟಿದ್ದ ಆರೋಪಿಯ ಫೋನ್‌ಪೇ ಬಳಸಿ ಬೆಟ್ಟಿಂಗ್ ಆಡಿದ ಆರೋಪ, ತುರುವೇಕೆರೆ ಪೊಲೀಸ್ ಠಾಣೆ ಪಿಎಸ್‌ಐ ಸಂಗಪ್ಪ ಮೇಟಿ ಅಮಾನತು, ಇಂಥ ಬೆಟ್ಟಿಂಗ್ ಆಡೋ ಪೊಲೀಸರು,ಬಡ್ಡಿ ವ್ಯವಹಾರ,ಸೆಟ್ಟಿಂಗ್ ಪೊಲೀಸರು ಇಲಾಖೆಯಲ್ಲಿ ಸಾಕಷ್ಟು ಇದ್ದು, ಇಂಥವರಿಂದಲೇ ಉತ್ತಮ ಪೊಲೀಸರಿಗೂ ಮುಜುಗರ.
ಪ್ರಕರಣವೊಂದರಲ್ಲಿ ಬಂಧನಕ್ಕೊಳಗಾಗಿದ್ದ ಆರೋಪಿಯ ಪೋನ್ ಪೇ ಪಾಸ್ವರ್ಡ್ ತೆಗೆದುಕೊಂಡಿದ್ದ ಪಿಎಸ್‌ಐ ಸಂಗಪ್ಪ ಮೇಟಿ. ಆರೋಪಿಯನ್ನ ಜೈಲಿಗೆ ಬಿಟ್ಟು ಆರೋಪಿಯ ಮೊಬೈಲ್ ಮೂಲಕವೇ ಬೆಟ್ಟಿಂಗ್ ಆಡಿದನಂತೆ ಶಹಬ್ಬಾಶ್!ಆರೋಪಿಯ ಪೋನ್ ಪೇ ನಲ್ಲಿದ್ದ 95000/- ರೂಪಾಯಿ ಹಣ ದುರ್ಬಳಕೆ ಮಾಡಿಕೊಂಡಿರುವ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ತುರುವೇಕೆರೆ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಸಂಗಪ್ಪ ಮೇಟಿಯನ್ನು ಕರ್ತವ್ಯದಿಂದ ಅಮಾನತು ಮಾಡಿ ತುಮಕೂರು ಎಸ್ ಪಿ ಅಶೋಕ್ ಕೆ.ವಿ ಆದೇಶ ಹೊರಡಿಸಿದ್ದಾರೆ.

