ಧಾರವಾಡ: ಮೊನ್ನೆ ಹುಬ್ಬಳ್ಳಿಯ ಅಶೋಕನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನಲ್ಲಿ ಇಬ್ಬರು ಮಹಿಳೆಯರು ಸೇರಿ 5ಜನರ ತಂಡ ಹುಬ್ಬಳ್ಳಿ ಪಾತ್ರೆ ಅಂಗಡಿ ಛಗನ್‌ಲಾಲ್ ಎಂಬಾತನಿಗೆ ಬೆತ್ತಲೆ ವಿಡಿಯೋಗಳನ್ನು ಇರಿಸಿಕೊಂಡು ಬ್ಲ್ಯಾಕ್‌ಮೇಲ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದು ಕೊನೆಗೆ ಸಿಸಿಬಿಯ ಬಲೆಗೆ ಬಿದ್ದು ಜೈಲು ಸೇರಿದ್ದರು, ಇದರ ಮುಂದಿನ ಅಧ್ಯಾಯ ಎನ್ನುವಹಾಗೆ ನೆನ್ನೆ ವಿದ್ಯಾಗಿರಿ ಪೋಲಿಸ್ ಠಾಣೆಯಲ್ಲಿ ರಾಯಚೂರು ಮೂಲದ ರೈತರೋರ್ವರು ಹನಿಟ್ರ್ಯಾಪ್ ದೂರನ್ನು ನೀಡಿದಾಗ ಇನ್ಸಪೆಕ್ಟರ್ ಸಂಗಮೇಶ ದಿಡಿಗನಾಳ ಜಾಗೃತರಾಗಿ ಕೂಡಲೇ ಪ್ರಕರಣ ದಾಖಲಿಸಿಕೊಂಡು ಕಾರ್ಯೋನ್ಮುಖರಾಗಿ ವಿದ್ಯಾಗಿರಿ ಪೋಲಿಸರ ಶ್ರಮದಿಂದ ಈ ಹನಿ ಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಸೇರಿ ಒಟ್ಟು 04 ಜನರ ಬಂಧನವಾಗಿದೆ, ಈ ತಂಡ ಮಹಿಳೆಯರನ್ನು ಬಿಟ್ಟು ರಾಯಚೂರಿನ ರೈತನೋರ್ವರ ಜೊತೆ ವೀಡಿಯೋ ಮಾಡಿ ನಂತರ ತಾವೇ ಪೊಲೀಸರೆಂದು ದಾಳಿ ಮಾಡಿ ಬ್ಲಾಕ್‌ಮೇಲ್ ಮಾಡುತ್ತಿದ್ದರೆಂದು ತಿಳಿದುಬಂದಿದೆ.
ಬಂಧಿತರಿಂದ 14,73,000/-ಮೌಲ್ಯದ ವಸ್ತುಗಳನ್ನು ಜಪ್ತು ಮಾಡಲಾಗಿದೆ ಅವುಗಳಲ್ಲಿ 04 ವಿವಿಧ ಕಂಪನಿಯ ಮೊಬೈಲ್ ಪೋನುಗಳು, ಒಂದು ಸ್ಕೋಡಾ ಕಂಪನಿ ಕಾರು, 5.50,000/- ರೂಪಾಯಿ ನಗದು ಹಣ, 85.05 ಗ್ರಾಂ ತೂಕದ 6,63,000/- ರೂಪಾಯಿ ಬೆಲೆ ಬಾಳುವ ಚಿನ್ನದ ಆಭರಣಗಳು, 3000/- ರೂ ಬೆಲೆಬಾಳುವ ಬೆಳ್ಳಿಯ ಕಡಗ ಹೀಗೆ ಒಟ್ಟು 14,73,000/- ರೂಪಾಯಿ ಮೌಲ್ಯದ ವಸ್ತುಗಳನ್ನು. ದಿನಾಂಕ 09/10/2024 ರಂದು ಧಾರವಾಡ ವಿದ್ಯಾಗಿರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತ ಹನಿಟ್ರ್ಯಾಪ್ ತಂಡದ ಚಹರೆ /ವಿವರ ಹೀಗಿದೆ:
ಬಂಧಿತರು ಇದೇ ರೀತಿಯಲ್ಲಿ ಇತರೆ ಪ್ರಕರಣಗಳನ್ನು ಮಾಡಿರುವ ಕುರಿತು ಪೊಲೀಸರಿಗೆ ಶಂಕೆ ಇದ್ದು ತನಿಖೆ ಮುಂದುವರೆದಿದೆ ಎಂದು ಡಿಸಿಪಿ ಮಹಾನಿಂಗ ನಂದಗಾಂವಿ ದಿನಾಂಕ 11/10/2024 ಶುಕ್ರವಾರದಂದು ಧಾರವಾಡ ವಿದ್ಯಾಗಿರಿ ಠಾಣೆಯಲ್ಲಿ ಸುದ್ಧೀಘೋಷ್ಠಿ ನಡೆಸಿ ಮಾಹಿತಿ ನೀಡಿದರು.
