ದಿನಾಂಕ 27.10.2024ರಂದು ಕರ್ನಾಟಕ ರಾಜ್ಯ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘ (ರಿ) ವತಿಯಿಂದ ಪ್ರತಿಭಾ ಪುರಸ್ಕಾರ, ನೌಕರರಿಗೆ ಸನ್ಮಾನ ಮತ್ತು ಅಭಿನಂದನಾ ಸಮಾರಂಭ

ಭಾಸ್ಕರ ಪತ್ರಿಕೆ
0

 





ತಿಪಟೂರು: ಕರ್ನಾಟಕ ರಾಜ್ಯ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘ (ರಿ) ವತಿಯಿಂದ ಪ್ರತಿಭಾ ಪುರಸ್ಕಾರ, ನೌಕರರಿಗೆ ಸನ್ಮಾನ ಮತ್ತು ಅಭಿನಂದನನಾ ಸಮಾರಂಭವನ್ನು ದಿನಾಂಕ 27.10.2024ನೇ ಭಾನುವಾರ ಬೆಳಗ್ಗೆ 11:00ಗೆ ತಿಪಟೂರಿನ ಪಿಜಿಎಂ ಕಲ್ಯಾಣ ಮಂಟಪ ರೈಲ್ವೆ ಸ್ಟೇಷನ್ ರಸ್ತೆ ಇಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷರಾದ ಶ್ರೀ ಕೆಎಸ್ ಎಂ ಸ್ವಾಮಿ ಇಂಜಿನಿಯರ್ ಬೆಸ್ಕಾಂ ತಿಪಟೂರ್ ಇವರು ತಿಪಟೂರಿನ ಜಯದೇವ ಹಾಸ್ಟೆಲಿನಲ್ಲಿ  ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಈ ಕಾರ್ಯಕ್ರಮವನ್ನು ಪಿಜಿಎಂ ಕಲ್ಯಾಣ ಮಂಟಪ ರೈಲ್ವೆ ಸ್ಟೇಷನ್ ರಸ್ತೆ ತಿಪಟೂರು ಇಲ್ಲಿ  ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು  ಸಿದ್ದಗಂಗಾ ಮಠ ತುಮಕೂರು, ಶ್ರೀ ಷ. ಬ್ರ. ಕರಿ ವೃಷಭದೇಶಿ ಕೇಂದ್ರ ಶಿವಯೋಗಿಸ್ವರ ಮಹಾಸ್ವಾಮಿಗಳು ಕಾಡು ಸಿದ್ದೇಶ್ವರ ಮಠ ನೋಣವಿನಕೆರೆ ಇವರು ವಹಿಸಲಿದ್ದು ಉದ್ಘಾಟನೆಯನ್ನು ಶ್ರೀ ಕೆ ಷಡಕ್ಷರಿ ಶಾಸಕರು ತಿಪಟೂರು ಮಾಡಲಿದ್ದಾರೆ , ಹಾಗೆ ಮುಖ್ಯ ಅತಿಥಿಗಳಾಗಿ ಶ್ರೀ ವಿ ಸೋಮಣ್ಣ ಮಾನ್ಯ ರೈಲ್ವೆ ಮತ್ತು ಜಲ ಶಕ್ತಿ ಖಾತೆ ಸಚಿವರು ಭಾರತ ಸರ್ಕಾರ ಹಾಗೂ ಸಂಸದರು ತುಮಕೂರು ಲೋಕಸಭಾ ಕ್ಷೇತ್ರ, ಹಾಗೆ ತಿಪಟೂರಿನ ಎಲ್ಲಾ ಮುಖಂಡರು  ಆಗಮಿಸಲಿದ್ದಾರೆ ಎಂದು ತಿಳಿಸಿದರು  ಅಂದು ಆ ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿಯಲ್ಲಿ ಶೇಕಡ 90% ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೌಕರರಿಗೆ ಸನ್ಮಾನ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು, ಈ ಕಾರ್ಯಕ್ರಮಕ್ಕೆ ತಿಪಟೂರು ತಾಲೂಕು ಮತ್ತು  ಸುತ್ತಮುತ್ತಲಿನ ತಾಲೂಕಿನ  ಎಲ್ಲಾ ಸಾರ್ವಜನಿಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕೆಂದು ಮನವಿ ಮಾಡಿದರು, ಈ ಸಂದರ್ಭದಲ್ಲಿ ಶ್ರೀ ತೋಂಟರಾಧ್ಯ ಉಪಾಧ್ಯಕ್ಷರು  ಹಾಗೂ ಶ್ರೀ ಎಸ್ ಆರ್ ಸುರೇಶ್  ಕಾರ್ಯದರ್ಶಿ  ಮತ್ತು ಶ್ರೀ ಚಿದಾನಂದ ಖಜಾಂಚಿ,  ತಿಪಟೂರು ಉಪಸ್ಥಿತರಿದ್ದರು. 

ವರದಿ: ಟಿ. ರಾಜು, ಬೆಣ್ಣೆನಹಳ್ಳಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*