ಶೇರು ಮಾರಕಟ್ಟೆಯಲ್ಲಿ ಹಣ ಹೂಡಿ ಒನ್‌-ಟು-ಡಬಲ್‌ ಲಾಭ ಎಂದು ಕೋಟಿ ಕೋಟಿ ವಂಚನೆ: 4ಜನ ಆಕ್ಸಿಸ್‌ ಬ್ಯಾಂಕಿನ ನಾಗರಭಾವಿ ಶಾಖೆ ಅಧಿಕಾರಿಗಳು ಸೇರಿ 8ಜನರ ಬಂಧನ, ಇನ್ನೂ 9ವಂಚಕರಿಗೆ ಸಿಸಿಬಿ ಬಲೆ

ಭಾಸ್ಕರ ಪತ್ರಿಕೆ
0

 



ಬೆಂಗಳೂರು: ಶೇರು ಮಾರಕಟ್ಟೆಯಲ್ಲಿ ಹಣ ಹೂಡಿದರೇ ಒನ್‌ ಟು ಡಬಲ್‌ ಆಗುತ್ತದೆ, ತಾವೇ ಡಬಲ್ ಮಾಡಿ ಕೊಡತ್ತೆವೆ ಎಂದು ವಂಚಿಸುವ ತಂಡವು ಸಿಸಿಬಿ ಬಲೆಗೆ ಬಿದ್ದಿದೆ, ಆಕ್ಸಿಸ್‌ ಬ್ಯಾಂಕಿನ 4 ನೌಕರರು ಸೇರಿ 8ಜನ  ವಂಚಕರನ್ನು ಸಿಸಿಬಿ ಬಂಧಿಸಿದೆ ಎಂದು ಪೊಲೀಸ್‌ ಕಮಿಷನರ್ ದಯಾನಂದ್‌ ತಿಳಿಸಿದ್ದಾರೆ.

ಆಕ್ಸಿಸ್‌  ಬ್ಯಾಂಕ್‌ ನಾಗರಭಾವಿ ಶಾಖೆಯ ಮ್ಯಾನೇಜರ್‌ ಕಿಶೋರ್‌ ಸಾಹು, ಮಾರಾಟ ವಿಭಾಗದ ಮ್ಯಾನೇಜರ್‌  ಮನೋಹರ್‌, ಮಾರಾಟ ವಿಭಾಗದ ಪ್ರತಿನಿಧಿಗಳಾದ ಕಾರ್ತಿಕ್‌, ರಾಕೇಶ್‌,ಹಾಗೂ ಚಿಕ್ಕಮಗಳೂರಿನ ಲಕ್ಷ್ಮೀಕಾಂತ್‌,ರಘುರಾಜ್‌,ಕೆಂಪೇಗೌಡ,ಮಾಲಾ ಬಂಧಿತರು. 
ಪ್ರಕರಣದ ಪ್ರಮುಖ ಆರೋಪಿ (ಕಿಂಗ್‌ಪಿನ್‌)ಸೇರಿ 9 ಮಂದಿ ತಲೆಮರೆಸಿಕೊಂಡಿದ್ದು,ಪೊಲೀಸರು ಅವರ ಬಂಧನಕ್ಕೆ ಬಲೆ ಬೀಸಿದ್ದಾರೆ, ಯಲಹಂಕ ನಿವಾಸಿಯೊಬ್ಬರಿಗೆ ಬರೋಬ್ಬರೀ 1. 5ಕೋಟಿ ರೂಪಾಯಿ ವಂಚಿಸಿದ್ದಾರೆ

ಆರೋಪಿಗಳ  ಬ್ಯಾಂಕ್‌ ಖಾತೆ ತಡಕಾಡಿ ಕೊನೆಗೆ 28ಲಕ್ಷ ವಹಿವಾಟು ಸ್ಥಗಿತಗೊಳಿಸುವ ವ್ಯವಸ್ಥೆಯನ್ನು ಪೊಲೀಸರು ಮಾಡಿದ್ದಾರೆಂದು ಬೆಂಗಳೂರು ಪೊಲೀಸ್‌ ಕಮಿಷನರ್ ಬಿ. ದಯಾನಂದ್‌ ಮಾಹಿತಿ ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*