ಸಾಲೂರು ಮಠದ ಶ್ರೀ ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ ಗಳ ಮುಡಿಗೆರಿದ ಡಾಕ್ಟರೇಟ್ ಪದವಿ .

ಭಾಸ್ಕರ ಪತ್ರಿಕೆ
0

ಚಾಮರಾಜನಗರ: ಮಲೆ ಮಹದೇಶ್ವರಸಾಲೂರು ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳವರಿಗೆ ಸಂಶೋಧನಾ ಪ್ರೌಢ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ (ಪೂರ್ವಾಶ್ರಮದ ಹೆಸರು ನಾಗೇಂದ್ರ ಎಂ) ಪೂಜ್ಯ ಶ್ರೀಮಠ ಹಿರಿಯಶ್ರಿಗಳಾದ ಶ್ರೀ ಗುರುಸ್ವಾಮಿಜಿಗಳವರ ದಿವ್ಯ ಆಶೀರ್ವಾದದಿಂದ ಕುಂದೂರು ಮಠದ ಮಠಾಧಿಪತಿಗಳು, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಖ್ಯಾತ ವಿದ್ವಾಂಸರಾದ ಡಾ. ಶರತ್‌ಚಂದ್ರ ಸ್ವಾಮಿಗಳ ಮಾರ್ಗದರ್ಶನದಲ್ಲಿ ಆಗಮಶಾಸ್ತ್ರದಲ್ಲಿ .ಪಿಎಚ್.ಡಿ. ಪದವಿ(ವಿದ್ಯಾವಾರಿಧಿ)ಗಾಗಿ “ಅಂಶುಮದಾಗಮಮ್ ಸಂಪಾದನಾತ್ಮಕಮಧ್ಯನಮ್” ಹಸ್ತಪ್ರತಿಯನ್ನು ಸಂಪಾದಿಸಿ ಸಂಶೋಧನಾ ಪ್ರೌಢ ಮಹಾಪ್ರಬಂಧ ಮಂಡಿಸಲಾಗಿತ್ತು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ಅಂಗಿಕರಿಸಿದೆ ಪ್ರೇರಣೆ ಹಾಗೂ ನನ್ನ ಮಾರ್ಗದರ್ಶನ ನೀಡಿದ ಕುಂದೂರುಮಠ ಪೂಜ್ಯ ಶ್ರೀ ಶರತ್ ಚಂದ್ರಸ್ವಾಮಿಗಳವರು, ಸುತ್ತೂರು ಜಗದ್ಗುರುಗಳು, ಸಿದ್ಧಗಂಗಾ ಶ್ರೀಗಳು ದೇಗುಲಮಠ ಶ್ರೀಗಳ ಮಾರ್ಗದರ್ಶನದಲ್ಲಿ ಶ್ರೀಮಠದ ಅಭ್ಯುದಯಕ್ಕೆ ಅಳಿಲು ಸೇವೆಗೆ ಶ್ರಮಿಸುತ್ತೇನೆ ಎಂದು ತಿಳಿಸಿದರು.   

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*