ಜಿಲ್ಲಾ ಮಕ್ಕಳ ರಕ್ಷಣಾ ಘಟಕ; ನಾಲ್ಕು ಚಿಂದಿ ಆಯುವ ಮಕ್ಕಳನ್ನು ರಕ್ಷಿಣೆ

ಭಾಸ್ಕರ ಪತ್ರಿಕೆ
0

ರಾಯಚೂರು: ನಗರದ ಗಂಜ್ ಏರಿಯಾ ಹತ್ತಿರ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನೆ ಮತ್ತು ಮಕ್ಕಳ ಸಹಾಯವಾಣಿ ಘಟಕದ ವತಿಯಿಂದ 0-18ವರ್ಷದ ಪೋಷಣೆ ಮತ್ತು ರಕ್ಷಣೆಯಡಿ ನಾಲ್ಕು ಚಿಂದಿ ಆಯುÄವ ಮಕ್ಕಳನ್ನು ರಕ್ಷಿಸಿ, ಸರ್ಕಾರಿ ಬಾಲಮಂದಿರಗಳಿಗೆ ದಾಖಲಿಸಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕಿರಲಿಂಗಪ್ಪ ಅವರು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಮಾರ್ಕೆಟ್ ಯಾರ್ಡ ಪೊಲೀಸ್ ಠಾಣೆಯ ಎ.ಎಸ್.ಐ ರಾಘವೇಂದ್ರ, ಜಿಲ್ಲಾ ಬಾಲ ಕಾರ್ಮಿಕ ಯೋಜನೆಯ ನಿರ್ದೆಶಕರಾದ ಮಂಜುನಾಥ ರೆಡ್ಡಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಿಬ್ಬಂದಿಗಳಾದ ತಿಕ್ಕಯ್ಯ, ಸಮಾಜ ಕಾರ್ಯಕರ್ತರು, ದಿನೇಶ ಕುಮಾರ್, ಈರಮ್ಮ, ಮಕ್ಕಳ ಸಹಾಯವಾಣಿ ಘಟಕದ ಸಿಬ್ಬಂದಿಗಳಾದ ಮಹೇಶ, ತಾಯರಾಜ್, ಮುಕ್ಕಣ್ಣ ಅವರು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*