ತಿಪಟೂರು: ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘ ರಿ, ತಿಪಟೂರು ಘಟಕ ವತಿಯಿಂದ ಜಗತ್ತಿಗೆ ಉತ್ಕೃಷ್ಟ ಮಹಾಕಾವ್ಯ ರಾಮಾಯಣವನ್ನು ನೀಡಿದ ಶ್ರೀ ಮಹರ್ಷಿ ವಾಲ್ಮೀಕಿ ಜನ್ಮ ಜಯಂತಿಯನ್ನು ನಗರದ ಹಾಸನ ಸರ್ಕಲ್ ಭಾಸ್ಕರ ಪತ್ರಿಕೆ ಕಚೇರಿಯಲ್ಲಿ ದೀಪ ಬೆಳಗಿಸಿ ಪೂಜೆ ಸಲ್ಲಿಸುವ ಮೂಲಕ ವಾಲ್ಮೀಕಿ ಜಯಂತಿ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷರು ಡಾಕ್ಟರ್ ಭಾಸ್ಕರ್, ಉಪಾಧ್ಯಕ್ಷರು ಹಾಗೂ ರೈತ ಕವಿ ಪಿ ಶಂಕರಪ್ಪ, ಖಜಾಂಚಿ ಶುಭ ವಿಶ್ವಕರ್ಮ, ಪ್ರಧಾನ ಕಾರ್ಯದರ್ಶಿ ಧರಣೇಶ್ ಕುಪ್ಪಾಳು,ತಿಪಟೂರಿನ ಹಿರಿಯ ನಾಗರಿಕರು ರಾಜಣ್ಣ, ಎಲ್ಐಸಿ ನಿವೃತ್ತ ಅಧಿಕಾರಿ ಜಯದೇವಪ್ಪ, ಮಾದಿಹಳ್ಳಿ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

