ತಿಪಟೂರು: ಕರ್ನಾಟಕದಲ್ಲಿ ಎಷ್ಟು ಜಿಲ್ಲೆಗಳಿವೆ ಹಾಗೂ ರಾಜ್ಯ, ತಾಲೂಕು ಹೀಗೆ ಹಲವಾರು ವಿಷಯದಲ್ಲಿ ಹಲವಾರು ಉತ್ತರಗಳನ್ನು ಹೇಳಿ /ಜನರ ಮನಗೆದ್ದು ಸೂಪರ್ ಕಿಡ್ ಅಂತಾನೆ ಹೆಸರು ಮಾಡಿದ್ದ ಡಾ. ಧವನಿ ತಾಯಿ ಶ್ರೀಮತಿ ರೇಖಾ ಅವರು ದಿನಾಂಕ 7/10/2024ರಂದು ಮಧ್ಯರಾತ್ರಿ 1:30ಕ್ಕೆ ಇಹಲೋಕ್ಕೆ ತೆರಳಿದ್ದಾರೆ. ಅವರು ಬೆಂಗಳೂರಿನಲ್ಲಿ ವಾಸವಿದ್ದು ಸಣ್ಣ ಮನೆಯೊಂದರಲ್ಲಿ ಕುಟುಂಬ ನಡೆಸುತ್ತಿದ್ದರು. ಇದ್ದಕ್ಕಿದ್ದಹಾಗೆ ಮೂಳೆ ಕ್ಯಾನ್ಸರ್ ಖಾಯಿಲೆಗೆ ಸುಮಾರು ವರ್ಷಗಳಿಂದ ತುತ್ತಾಗಿದ್ದರು. ಮೃತರು ಪತಿ ನವೀನ್ ಕುಮಾರ್ ಪುತ್ರಿ ಧವನಿ ಹಾಗೂ ಅನೇಕ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ. ಮೃತರ ಕುಟುಂಬದವರಿಗೆ ಆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಹಾಗೂ ಮೃತರ ಆತ್ಮಕ್ಕೆ ಶಾಂತಿ ನೀಡಲೆಂದು ಭಾಸ್ಕರ ಪತ್ರಿಕೆಯ ಪ್ರಧಾನ ಸಂಪಾದಕರಾದ ಹಿರಿಯ ಪತ್ರಕರ್ತ ಡಾ. ಭಾಸ್ಕರ್, ಭಾಸ್ಕರ ಟಿವಿ ಯೂಟ್ಯೂಬ್ ಮಾಧ್ಯಮದ ಸುದ್ದಿವಾಚಕರಾದ ಶ್ರೀಮತಿ ಶುಭ ವಿಶ್ವಕರ್ಮ ಹಾಗೂ ಭಾಸ್ಕರ ಪತ್ರಿಕಾ ಬಳಗ ಸಂತಾಪ ಸೂಚಿಸಿದೆ.
ಕಾಮೆಂಟ್ ಪೋಸ್ಟ್ ಮಾಡಿ
0ಕಾಮೆಂಟ್‌ಗಳು
3/related/default
