Saligrama: ಹುಟ್ಟುಹಬ್ಬ ಆಚರಿಸಿದ ರಾತ್ರಿಯೇ ಹೃದಯ ಘಾತದಿಂದ ಪಶುವೈದ್ಯ ಸಾವು

ಭಾಸ್ಕರ ಪತ್ರಿಕೆ
0

 


ಸಾಲಿಗ್ರಾಮ : ತನ್ನ ಹುಟ್ಟುಹಬ್ಬ ಆಚರಿಸಿಕೊಂಡು ರಾತ್ರಿಯಲ್ಲಿಯೇ, ಜೀವನ ಸಾಗಿಸುವ ಮುನ್ನವೇ ಜೀವದ ಕೊನೆಯುಸಿರೆಳೆದ ಪಶು ವೈದ್ಯ ಯುವಕ,ಹೃದಯಘಾತ ದಿಂದ ಸಾವುನಪ್ಪಿರುತ್ತಾರೆ.

ಸಾಲಿಗ್ರಾಮ ಪಟ್ಟಣದ ಅಖಿಲೇಶ್ ಎಂ ಗೌಡ( 28 ವರ್ಷ ) ಇವರು ಬೆಂಗಳೂರು ಕೆ ಎಂ ಎಫ್ ನಲ್ಲಿ ಪಶು ವೈದ್ಯರಾಗಿ ಸೇವೆಯನ್ನು ಸಲ್ಲಿಸುತ್ತಿದ್ದರು, ಇಂದು ಹುಟ್ಟುರಾದ ಸಾಲಿಗ್ರಾಮದಲ್ಲಿ ತೋಟದ ಹಬ್ಬ ಮಾಡಲು ಎಲ್ಲಾ ರೀತಿಯಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಮೃತರ ತಾಯಿ ಊರದ ಹೊಳೆನರಸೀಪುರ ತಾಲೂಕಿನ ಕಡುವಿನಕೋಟೆ ಗೆ ಶನಿವಾರ ದಿವಸ ಹಬ್ಬಕ್ಕೆ ಎಂದು ಹೋಗಿ ಅಲ್ಲಿಯೇ ರಾತ್ರಿ ತಾಯಿ ಮನೆಯಲ್ಲಿ ತನ್ನ ಹುಟ್ಟುಹಬ್ಬ ವನ್ನು ಆಚರಿಸಿಕೊಂಡು ಊಟ ಮಾಡಿ ಮಲಗಿಕೊಂಡು ಇಂದು ಭಾನುವಾರ ಸಾಲಿಗ್ರಾಮದ ಹಬ್ಬಕ್ಕೆ ಎಂದು ಮನೆಯವರು ಹೊರಡುವ ವೇಳೆಯಲ್ಲಿ, ಮಲಗಿರುವ ಅಖಿಲೇಶ್ ಎಂ ಗೌಡ ಇವರನ್ನು ಎಚ್ಚರ ಮಾಡಲು ಹೋದಾಗ, ಅಷ್ಟರ ಒಳಗೆ ಸಾವನಪ್ಪಿರುತ್ತಾರೆ.

ಮೃತ ಪಟ್ಟ ವ್ಯಕ್ತಿಯ ಮದುವೆಯು ಮುಂದಿನ ತಿಂಗಳು ನವಂಬರ್ ನಲ್ಲಿ ಇರುತ್ತದೆ, ದಿನಾಂಕ ವನ್ನು ನಿಗದಿ ಪಡಿಸಿ, ಮದುವೆಗೆ ಬೇಕಾಗುವ ಎಲ್ಲಾ ರೀತಿಯ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲು ಪ್ರಾರಂಭಿಸಿದ್ದರು. ಆದರೆ ನಡೆದ ಸಾವಿನ ಘಟನೆಯಿಂದ ಅಪಾರ ಬಂದು ಬಳಗ, ಸ್ನೇಹಿತರು ಹಾಗು ಜನತೆಯ ಆಕ್ರಂದನ ಮುಗಿಲು ಮುಟ್ಟಿತು.

ಮೃತರು ಮಾಜಿ ಸಚಿವ ಸಾರಾ ಮಹೇಶ್ ರವರ ಸಹೋದರರಾದ ಗ್ರಾಮದ ನಿವಾಸಿ ಎಂ ಡಿ ಮಂಜ ಇವರ ಪತ್ನಿ ರೇಣುಕ ಇವರ ಏಕೈಕ ಪುತ್ರ ರಾಗಿದ್ದು, ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ಇವರ ಅಂತ್ಯ ಕ್ರಿಯೆಯು ಇಂದು ಸಂಜೆ ಸ್ವಗ್ರಾಮ ದಲ್ಲಿ ನೆರವೇರಿತು.

ಮಾಜಿ ಸಚಿವ ಸಾರಾ ಮಹೇಶ್, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಸಾರಾ ನಂದೀಶ್, ಮೈಸೂರು ಜಿಲ್ಲಾ ನಿರ್ದೇಶಕ ಅಮಿತ್ ದೇವರಹಟ್ಟಿ,ತಂಬಾಕು ಮಂಡಳಿ ಸೂಪರ್ ವೈಸರ್ ದಿನೇಶ್ ನಂಜಪ್ಪ, ವಿ ಎಸ್ ಎಸ್ ಎನ್ ಮಾಜಿ ಅಧ್ಯಕ್ಷ ಪಟೇಲ್ ಆನಂದ್, ಜಿ ಪಂ ಮಾಜಿ ಸದಸ್ಯ ಎಂ ಟಿ ಕುಮಾರ್ ಸೇರಿದಂತೆ ಇತರರು ಮೃತರ ಅಂತಿಮ ದರ್ಶನ ಪಡೆದರು.

ಮೃತ ಅಖಿಲೇಶ್ ಎಂ ಗೌಡ ತಂದೆ ಎಂ.ಡಿ ಮಂಜುನಾಥ್‌ ಭಾಸ್ಕರ ಪತ್ರಿಕೆಯ ಸಂಪಾದಕರಾದ ಡಾ. ಭಾಸ್ಕರ್‌ ಅವರ ಮಿತ್ರರು, ಇವರ ಅಖಿಲೇಶ್ ಎಂ ಗೌಡ ಈ ಅಗಲಿಕೆಗೆ ಭಾಸ್ಕರ ಪತ್ರಿಕೆಯ ಸಂಪಾದಕರಾದ ಡಾ. ಭಾಸ್ಕರ್‌ ಹಾಗೂ ಭಾಸ್ಕರ ಪತ್ರಿಕಾ ಬಳಗ ತೀವ್ರ ಸಂತಾಪ ವ್ಯಕ್ತಪಡಿಸಿದೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*