ಧಾರವಾಡ: ನೆನ್ನೆ ಲೋಕಾಯುಕ್ತರು ದಾಳಿ ನಡೆಸಿದ ಭಾರೀ ಕುಳಗಳ ಅಕ್ರಮ ಅಸ್ತಿ ವಿವರ ಅನಾವರಣ ಮಾಡಿದ್ದಾರೆ, ಇನ್ನೂ ಕೆಲವು ಆಯಾಮಗಳಲ್ಲಿ ತನಿಖೆ ಮುಂದುವರೆದಿದ್ದು, ಧಾರವಾಡ ಕೆಐಎಡಿಬಿ ಎಇಇ ಗೋವಿಂದಪ್ಪ ಭಜಂತ್ರಿ ಅಕ್ರಮ ಆಸ್ತಿ ರೂ 2. 79 ಕೋಟಿ, ಉಗರಗೋಳ ಫಾರ್ಮ್ ಹೌಸ್‌ನಲ್ಲಿ ಗೋವಿಂದ ಭಜಂತ್ರಿ ಬಚ್ಚಿಟ್ಟಿದ್ದ 48ಲಕ್ಷ ಪತ್ತೆಯಾಗಿದೆ.
ಇದರ ಜೊತೆಗೆ ಗೋವಿಂದಪ್ಪ ಹನುಮಂತಪ್ಪ ಭಜಂತ್ರಿ ಅವರ ಸಂಬಂಧಿಗಳ ಮನೆಯಲ್ಲಿನ ಚಿನ್ನ ಬೆಳ್ಳಿ ವಸ್ತುಗಳನ್ನು ತನಿಖೆಗಾಗಿ ವಶಪಡಿಸಿಕೊಳ್ಳಲಾಗಿದೆ.
ಅಕ್ರಮ ಆಸ್ತಿ ವಿವರ:
ಸ್ಥಿರಾಸ್ತಿ 1. 85ಕೋಟಿ
ನಗದು 41. 11ಲಕ್ಷ
ಚಿನ್ನ 27. 11ಲಕ್ಷ
ವಾಹನಗಳು 20ಲಕ್ಷ
ಇತರೇ 6 ಲಕ್ಷ
ಒಟ್ಟು 2. 79ಕೋಟಿ ಅಕ್ರಮ ಆಸ್ತಿ ಪತ್ತೆಯಾಗಿದೆ.
ರೇಡ್ ಆದಾಗ ಅವರು ಬೆಂಗಳೂರಲ್ಲಿ ಇದ್ದರು, ಕೆಐಎಡಿಬಿ ಕಛೇರಿ ತೆರಳಿ ಅಧಿಕಾರಿಗಳು ಕೆಲವು ದಾಖಲೆಗಳನ್ನು ತೆಗೆದೊಯ್ದಿದಾರೆ, ತನಿಖೆ ಇನ್ನೂ ಮುಂದುವರೆದಿದೆ.

