ತಿಪಟೂರು: ಜಾತ್ಯಾತೀತ ಜನತಾದಳದ ನಗರದ ಯುವ ಅಧ್ಯಕ್ಷರನ್ನಾಗಿ ಜಿ.ಎಲ್. ಸುದರ್ಶನ್ ರನ್ನು ಆಯ್ಕೆ ಮಾಡಿದ್ದಾರೆ. ಜೆಡಿಎಸ್ ಜಿಲ್ಲಾಧ್ಯಕ್ಷರಾದ ಆರ್.ಸಿ. ಆಂಜನಪ್ಪ ಒಕ್ಕೊರೊ ಲಿನ ಅಭಿಪ್ರಾಯದಂತೆ ಸುದ ರ್ಶನ್ ಅವರನ್ನು ನೇಮಕ ಮಾಡ ಲಾಗಿದೆ ಎಂದು ತಿಳಿಸಿದ್ದಾರೆ.
ಸುದರ್ಶನ್ ವೀರಶೈವ ಲಿಂಗಾಯಿತ ಸಮಾಜದ ಯುವ ಮುಖಂಡನಾಗಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ರೈತಪರ ಹಲವು ಹೋರಾಟಗಳಲ್ಲಿ ಕೆ.ಟಿ. ಶಾಂತಕುಮಾರ್ ಜೊತೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಇವರ ಆಯ್ಕೆಯನ್ನು ಜಿಲ್ಲಾ ಮತ್ತು ತಾಲ್ಲೂಕು ನಗರ ಜೆಡಿಎಸ್ ಕಾರ್ಯಕರ್ತರು ಸ್ವಾಗತಿಸಿದ್ದಾರೆ.
