ತಿಪಟೂರು: ನಗರದಲ್ಲಿ ನೀರಿನ ಬವಣೆಗೆ ನಗರಸಭೆಯ ಆಯುಕ್ತರೇ ಮುಖ್ಯ ಕಾರಣ ಎಂದು ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್ ಆರೋಪಿಸಿದರು.
ನಗರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರು ಸಧ್ಯದಪರಿಸ್ಥಿತಿಯಲ್ಲಿ ನೀರಿನ ಸಮಸ್ಯೆಗೆ ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ನೀರಿನ ಟ್ಯಾಂಕರ್ ಬೆಲೆ ದುಬಾರಿಯಾಗಿದ್ದು ನಗರದ ಜನರಿಗೆ ನೀರು ನೀಡುವ ವಿಚಾರವಾಗಿ ಆಯುಕ್ತರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಮುಂದಿನ ತಿಂಗಳು ನಗರಸಭೆ ಮುಂಭಾಗದಲ್ಲಿ ನೂರಾರು ಜನರ ಸಮ್ಮುಖದಲ್ಲಿ ನೀರಿಗಾಗಿ ಧರಣಿ ಮಾಡಲಾಗುತ್ತದೆ. ತೋಟದ ಮನೆಗಳಿಗೆ ರಾತ್ರಿ ವಿದ್ಯುತ್ ನೀಡಲು ಬೆಸ್ಕಾಂ ಇಲಾಖೆ ವಿಫಲ ವಾಗಿದೆ. ಚಿರತೆಗಳ ಹಾವಳಿ ಯಿಂದ ಜನ- ಜಾನು ವಾರು ಗಳಿಗೆ ತೊಂದರೆ ಆಗುತ್ತಿ ದ್ದರು ಇಲಾಖೆ ಜಾಣ ಮೌನ ವಹಿಸಿದೆ. ಕೂಡಲೇ ಗಮನ ಕೊಡಬೇಕು ಎಂದರು.

