ತಿಪಟೂರು: ದಿನಾಂಕ 23/04/2025 ನೇ ಬುದುವಾರ ಬೆಂಗಳೂರು ಜೆಸಿ ರಸ್ತೆಯ ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ಯಮಟ್ಟದ ವಿಶ್ವಕರ್ಮ ಸಮಾವೇಶ ಹಾಗೂ ಸಂಘದ 5 ನೇ ವರ್ಷದ ವಾರ್ಷಿಕೋತ್ಸವ ಹಾಗೂ ವಿಶ್ವಕರ್ಮ ಸಮಾಜದ ಪಂಚ ವೃತ್ತಿಗಳಲ್ಲಿ ತೊಡಗಿಕೊಂಡು ಎಲೆ ಮರಿ ಕಾಯಂತಿದ್ದು ಅಮೋಘ ಸಾಧನಗೈದಿರುವ ಸಾಧಕರನ್ನು ಹಾಗೂ ಕಲೆ ಸಾಹಿತ್ಯ. ನಾಟಕ. ಶಿಕ್ಷಣ ಕಾನೂನು. ವೈದ್ಯಕೀಯ ಇನ್ನಿತರ ಕ್ಷೇತ್ರಗಳಲ್ಲಿ ಅಮೋಘ ಸಾಧನೆಗೈದಿರುವ ಸಾಧಕೀಯರನ್ನು ಗುರುತಿಸಿ ಅವರಿಗೆ ವಿಶೇಷವಾಗಿ ಪ್ರಶಂಶಿಯ ಪತ್ರ ಫಲಕಗಳೊಂದಿಗೆ ಗೌರವಿಸಲಾಗುವುದು ಹಾಗೂ ನಾಡು ನುಡಿಗಾಗಿ ಸೇವೆ ಸಲ್ಲಿಸುತ್ತಿರುವ ಸಮಾಜದ ಹಾಗೂ ಇತರೆ ಸಮಾಜದ ನೂರಾರು ಹಿರಿಯ ಗಣ್ಯರನ್ನು ಇದೇ ಸಂದರ್ಭದಲ್ಲಿ ಪುರಸ್ಕರಿಸಲಾಗುವುದು.
ಈ ಎಲ್ಲಾ ಸಮಾವೇಶದ ಸಮಾರಂಭದ ಕೇಂದ್ರ ಬಿಂದು ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲಿರುವ ಮಹಿಳಾ ಸಾಧಕಿಯಾದ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿಗಳು ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜದ ರಾಜ್ಯಾಧ್ಯಕ್ಷರು ನಮ್ಮ ಕರ್ನಾಟಕ ಅಹಿಂದ ಜನಪರ ವೇದಿಕೆ ರಾಜ್ಯಾಧ್ಯಕ್ಷರು ಶ್ರೀಮತಿ ವಸಂತ ಮುರಳಿ ರವರನ್ನು ಸಮಾವೇಶದ ಸಭಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವ ಅಂಗವಾಗಿ ದಿನಾಂಕ 09/03/2025 ನೇ ಭಾನುವಾರ ಸಮಯ ಮಧ್ಯಾಹ್ನ 1:30 ಕ್ಕೆ ಸರಿಯಾಗಿ ಹೋಟೆಲ್ ಗ್ರಾಂಡ್ ಹಾಸನ ಸರ್ಕಲ್ ತಿಪಟೂರು, B.H ರಸ್ತೆ ತಿಪಟೂರು
ಇಲ್ಲಿ ಶ್ರೀಮತಿ ವಸಂತ ಮುರುಳಿ ರವರಿಗೆ ಅಭಿನಂದನಾ ಸಮಾರಂಭವನ್ನು ಕರ್ನಾಟಕ ವಿಶ್ವಕರ್ಮ ಜನ ಸೇವಾ ಸಂಘದ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷರಾದ ಡಾ. ಭಾಸ್ಕರಾಚಾರ್, ಸಂಘದ ಉಪಾಧ್ಯಕ್ಷರಾದ ದೇವೇಂದ್ರಾಚಾರ್ ಹಂದನಕೆರೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಪರಮೇಶ್ವರಾಚಾರ್ ಹಾಗೂ ವಿಶ್ವಕರ್ಮ ಬಂಧುಗಳು, ತಿಪಟೂರು ನಾಗರಿಕರ ಪರವಾಗಿ ಹಮ್ಮಿಕೊಳ್ಳಲಾಗಿದೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಪರಮಪೂಜ್ಯ ಶ್ರೀ ಶ್ರೀ ಮಹೇಶ್ವರಾನಂದ ಗುರೂಜಿ ಧ್ಯಾನ ಯೋಗಾಶ್ರಮ ಬಾಗೇಪಲ್ಲಿ ಚಿಕ್ಕಬಳ್ಳಾಪುರ ರವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ ಈ ಸಮಾರಂಭದ ಸಾರಥ್ಯವನ್ನು ರಾಜ್ಯಾಧ್ಯಕ್ಷರು ಎಂ ಸೋಮಶೇಖರ್ (ಕನ್ನಡ ಸೋಮು) ಅತ್ತಿಬೆಲೆ. ಬೆಂಗಳೂರು ಮತ್ತು ರಾಜ್ಯ ಮಹಿಳಾಧ್ಯಕ್ಷರು ಶ್ರೀಮತಿ ಲಕ್ಷ್ಮಿ ಭಾಸ್ಕರ್ ಬಡಿಗೇರ್ ಧಾರವಾಡ ಇವರು ವಹಿಸಲಿದ್ದಾರೆ

