ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಳಕ್ಕೆ ಗ್ರಾಮಸ್ಥರು ಹಾಗೂ ಪೋಷಕರ ಸಹಕಾರ ಬಹಳ ಮುಖ್ಯ: ಹೆಚ್ .ಕೆ. ಮನಮೋಹನ್

ಭಾಸ್ಕರ ಪತ್ರಿಕೆ
0

ತಿಪಟೂರು: ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿಯ  ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕರಡಾಳು ಸಂತೆ ಮೈದಾನ  ಶಾಲೆಯ  ಚಿಣ್ಣರ ಚಿಲಿಪಿಲಿ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಶಾಲಾ ಶಿಕ್ಷಣ ಇಲಾಖೆ ತುಮಕೂರು ದಕ್ಷಿಣ ಜಿಲ್ಲೆಯ   ಉಪನಿರ್ದೇಶಕ ಹೆಚ್. ಕೆ. ಮನಮೋಹನ್ ಮಾತನಾಡಿ ಎಲ್ಲ ಗ್ರಾಮಗಳಲ್ಲಿ ಈ ಗ್ರಾಮದಲ್ಲಿ ನೀಡುತ್ತಿರುವಂತೆ ಪ್ರೋತ್ಸಾಹ ಹಾಗೂ ಸಹಕಾರ ನೀಡಿದರೆ ಯಾವುದೇ ಸರ್ಕಾರಿ ಶಾಲೆಗಳು ದಾಖಲಾತಿ ಕೊರತೆ ಯಿಂದ ಮುಚ್ಚುವ ಹಂತಕ್ಕೆ ತಲುಪುವುದಿಲ್ಲ ಆದಕಾರಣ ಪೋಷಕರು ಕಾನ್ವೆಂಟ್ ವ್ಯಾಮೋಹ ಬಿಟ್ಟು ಉತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ಸರ್ಕಾರಿ ಶಾಲೆಗಳಿಗೆ ನಿಮ್ಮ ಮಕ್ಕಳನ್ನು  ದಾಖಲಿಸಬೇಕೆಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ  ಜಿ  .ಚಂದ್ರಯ್ಯ ಸರ್ಕಾರಿ ಶಾಲೆಗಳು ಮಕ್ಕಳ ಸರ್ವಾಂಗೀಣ ಪ್ರಗತಿಗೆ ಶ್ರಮಿಸುತ್ತಿವೆ ಅದರಲ್ಲಿಯೂ ಈ  ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಪಠ್ಯ ಹಾಗೂ ಸಹಪಠ್ಯ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡು ಗುಣಾತ್ಮಕ ಶಿಕ್ಷಣಕ್ಕೆ ಮಹತ್ವ ನೀಡಿದೆಆದಕಾರಣ ಎಲ್ಲ ಪೋಷಕರು ಸರ್ಕಾರದ ಮಹತಿಕಾಂಕ್ಷಿ ಯೋಜನೆಗಳನ್ನ ಸದುಪಯೋಗಪಡಿಸಿಕೊಂಡು ಮಕ್ಕಳ ಬೌದ್ಧಿಕ ಮತ್ತು ಮಾನಸಿಕ ವಿಕಾಸಕ್ಕಾಗಿ  ಸರ್ಕಾರಿ ಶಾಲೆಗಳಿಗೆ ನಿಮ್ಮ ಮಕ್ಕಳನ್ನು ದಾಖಲು ಮಾಡಬೇಕೆಂದು ಮನವಿ ಮಾಡಿದರು ಸದರಿ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ,ಶ್ರೀಮತಿ ಮಂಜುಳಾ ಸೋಮಶೇಖರ್, ದರ್ಶನ್ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಖ್ಯಾತ ದಂತ ವೈದ್ಯರುಗಳಾದ ಡಾ. ಬಸವಪ್ರಸಾದ್ ಹಾಗೂ ಡಾ. ಕೆ ಎಸ್ ದೀಪ ಇವರುಗಳನ್ನು ಸನ್ಮಾನಿಸಲಾಯಿತು ಇದೇ ಕಾರ್ಯಕ್ರಮದಲ್ಲಿ ಈ ಶಾಲೆಯಲ್ಲಿ ಸುಮಾರು 14 ವರ್ಷಗಳ ಕಾಲ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿದ್ದ ಸಹಶಿಕ್ಷಕಿ ಛಾಯಾ. ಎನ್. ಇವರ  ಉತ್ತಮ ಸೇವೇಗಾಗಿ ಎಸ್ ಡಿ ಎಂ ಸಿ ಅಧ್ಯಕ್ಷರು ಸದಸ್ಯರು ಗ್ರಾಮಸ್ಥರು ಪೋಷಕರು ಮಕ್ಕಳು, ಹಿರಿಯ ಹಿರಿಯವಿದ್ಯಾರ್ಥಿಗಳು ಎಲ್ಲರೂ ಸೇರಿ ಬೀಳ್ಕೊಡಿಕೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು  ಈ ಕುರಿತು ಮಾತನಾಡಿದ ಎಸ್ಡಿಎಂಸಿ ಅಧ್ಯಕ್ಷ ಕೆ ಎಲ್.ಗೋಪಿ  ಸದರಿ ಶಿಕ್ಷಕಿ ನಮ್ಮ ಶಾಲೆಗೆ  ಬಂದ ಮೇಲೆ ಬಹಳಷ್ಟು ಮಕ್ಕಳು ಉತ್ತಮ ರೀತಿ ಕಲಿಕೆಯನ್ನು ಸಾಧಿಸಿ ಇಂದು ನೂರಾರು ಮಕ್ಕಳು ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ ಇವರ ಕೈ ಕೆಳಗೆ ಓದಿದ ಮಕ್ಕಳು ನಗರ ವ್ಯಾಪ್ತಿಯ ಮಕ್ಕಳಿಗೆ ಪೈಪೋಟಿ ನೀಡಿ ಆಂಗ್ಲ ಮಾದ್ಯಮದಲ್ಲಿಎಸ್ ಎಸ್ ಎಲ್ ಸಿ,   ಪಿ ಯು ಸಿ ,ಯಲ್ಲಿ ಕೆಲವು ಮಕ್ಕಳು ತಾಲೂಕಿಗೆ ಪ್ರಥಮ, ದ್ವಿತೀಯ ಸ್ಥಾನ ಮತ್ತು ಶಾಲೆಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ ಹಾಗೂ ಉತ್ತಮ ಫಲಿತಾಂಶವನ್ನು ನೀಡಿದ್ದಾರೆ  ಎಂದರು. 

ಕಾರ್ಯಕ್ರಮದಲ್ಲಿ ಕಲ್ಪತರು ರತ್ನ ಡಾಕ್ಟರ್ ಜಿ ಎಸ್ ,ಶ್ರೀಧರ್  , ಡಾಕ್ಟರ್ ರಕ್ಷಿತ್ ಗೌಡಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಡಿ.ಎಸ್. ಶಿವಶಂಕರ್ ಇ. ಸಿ .ಓ .ಮಂಜುನಾಥ್  ಗ್ರಾಮ ಪಂಚಾಯಿತಿ  ಮಾಜಿಸದಸ್ಯರಾದ ಶಂಕರಯ್ಯ, ಕೆಡಿ ಚಂದ್ರಶೇಖರ್, ಕುಶಲಕರ್ಮಿ ಕೆಂಪಾಚಾರ್ ಮುಖಂಡರಾದ ಶೀಲಾ ಎನ್ ಮೂರ್ತಿ, ಸ್ವರೂಪ್, ಲತೇಶ್, ಮಂಜುನಾಥ್, ಸತ್ಯ ಕುಮಾರ್. ದಾನಿಗಳಾದ ವಾಜಿದ್  ಮಂಜುನಾಥ್,(ತಾತಯ್ಯ)  ಸತ್ಯ ಕುಮಾರ್,ಡ್ರೈವರ್ ಮಂಜಣ್ಣ,  ಕೆ ಬಿ ವಿರೂಪಾಕ್ಷ.  ಲತೇಶ್,ಯೋಗಾನಂದ ಬೀರಲಿಂಗಪ್ಪ  ಎಸ್ ಡಿ ಎಮ್ ಸಿ ಸದಸ್ಯರುಗಳು ಗ್ರಾಮಸ್ಥರುಗಳು ಪೋಷಕರು ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು ಈ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾಶಿಕ್ಷಕರ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಟಿ.ಕೆ. ಪಟ್ಟಾಭಿರಾಮು ಸ್ವಾಗತಿಸಿ ಸಹ ಶಿಕ್ಷಕಿ ಕನ್ಯಾಕುಮಾರಿವಂದಿಸಿದರು.

ವರದಿ: ಟಿ. ರಾಜು ಬೆಣ್ಣೇನಹಳ್ಳಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*