ಪಾಕಿಸ್ತಾನ ರೈಲು ಹೈಜಾಕ್ : 16 ಬಿಎಲ್ಎ ಹೋರಾಟಗಾರರು ಸಾವು; 104 ಒತ್ತೆಯಾಳುಗಳ ರಕ್ಷಣೆ

ಭಾಸ್ಕರ ಪತ್ರಿಕೆ
0


ಪಾಕಿಸ್ತಾನದಲ್ಲಿ ಜಾಫರ್ ಎಕ್ಸ್ ಪ್ರೆಸ್ ರೈಲನ್ನು ಅಪಹರಿಸಿದ ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್ಎ) ಎಂಟು ಗಂಟೆಗಳ ಯುದ್ಧದ ನಂತರ ತನ್ನ ಪಡೆಗಳು ಪಾಕಿಸ್ತಾನ ಪಡೆಗಳನ್ನು ಹಿಮ್ಮೆಟ್ಟಿಸಿದೆ ಎಂದು ಹೇಳಿಕೊಂಡಿದೆ. ಈ ಗುಂಪು ಆರಂಭದಲ್ಲಿ 214 ಮಂದಿಯನ್ನು ಒತ್ತೆಯಾಳಾಗಿಸಿತ್ತು. ಬಲೂಚ್ ಕೈದಿಗಳನ್ನು ಬಿಡುಗಡೆ ಮಾಡಲು ಪಾಕಿಸ್ತಾನಕ್ಕೆ 48 ಗಂಟೆಗಳ ಗಡುವು ನೀಡಿತ್ತು. ಆದರೂ ಬಿಎಲ್ಎ 104 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ ಎಂದು ವರದಿಯಾಗಿದೆ. ಆದರೆ ಭದ್ರತಾ ಪಡೆಗಳು ಈ ಪ್ರದೇಶವನ್ನು ಸುತ್ತುವರೆದಿವೆ.

ದಾಳಿಯ ನಂತರ, ನೂರಾರು ರೈಲು ಪ್ರಯಾಣಿಕರನ್ನು ದಾಳಿಕೋರರು ಒತ್ತೆಯಾಳುಗಳಾಗಿಸಿದ್ದರು. 58 ಪುರುಷರು, 31 ಮಹಿಳೆಯರು ಮತ್ತು 15 ಮಕ್ಕಳು ಸೇರಿದಂತೆ 104 ಒತ್ತೆಯಾಳುಗಳನ್ನು ಭದ್ರತಾ ಪಡೆಗಳು ರಕ್ಷಿಸಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. 16 ದಾಳಿಕೋರರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ. ದಾಳಿಕೋರರು ಭಾರಿ ನಷ್ಟವನ್ನು ಅನುಭವಿಸಿದ್ದಾರೆ ಮತ್ತು ಈಗ ಸಣ್ಣ ಗುಂಪುಗಳಾಗಿ ವಿಭಜನೆಗೊಂಡಿದ್ದಾರೆ ಎಂದು ಭದ್ರತಾ ಅಧಿಕಾರಿಗಳು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*