ಗಾಝಾದಲ್ಲಿ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಸ್ಥಗಿತಗೊಳಿಸಿದ ಇಸ್ರೇಲ್: ಗಾಝಾದಲ್ಲಿ ಸಂಪೂರ್ಣ ಕತ್ತಲು

ಭಾಸ್ಕರ ಪತ್ರಿಕೆ
0

ಗಾಝಾದ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಇಸ್ರೆಲ್ ಸ್ಥಗಿತಗೊಳಿಸಿದ್ದು ಗಾಝಾ ಸಂಪೂರ್ಣ ಕತ್ತಲಲ್ಲಿ ಮುಳುಗಿದೆ. ಈ ಕಾರಣದಿಂದಾಗಿ ಗಾಝಾದ ದೊಡ್ಡ ಭಾಗಕ್ಕೆ ನೀರು ವಿತರಣೆ ಮಾಡುತ್ತಿದ್ದ ಕೈಗಾರಿಕಾ ಸ್ಥಾವರಕ್ಕೂ ತೊಂದರೆ ಉಂಟಾಗಿದೆ ಎಂದು ತಿಳಿದುಬಂದಿದೆ. ಗಾಝಾದ ಜನರನ್ನು ಹಸಿವಿಗೆ ದೂಡಿ ಯುದ್ಧವನ್ನು ಗೆಲ್ಲುವ ಇಸ್ರೇಲ್ ತಂತ್ರದ ಭಾಗ ಇದಾಗಿದೆ ಎಂದು ಹಮಾಸ್ ಪ್ರತಿಕ್ರಿಯಿಸಿದೆ.

ಎರಡು ದಶ ಲಕ್ಷಕ್ಕಿಂತಲೂ ಅಧಿಕ ಗಾಝಾದ ಮಂದಿಯ ವಿರುದ್ಧ ಕಳೆದ ವಾರ ಆಹಾರ ವಸ್ತುಗಳ ಸಾಗಾಟಕ್ಕೆ ಇಸ್ರೇಲ್ ನಿರ್ಬಂಧ ಹೇರಿತ್ತು. ಇದೀಗ ವಿದ್ಯುತ್ ವಿತರಣೆಯನ್ನು ಕೂಡ ಸ್ಥಗಿತಗೊಳಿಸಿದೆ. ಯುದ್ಧದ ಸಂದರ್ಭದಲ್ಲಿ ಇಸ್ರೇಲ್ ವಿದ್ಯುತ್ತನ್ನು ಸ್ಥಗಿತಗೊಳಿಸಿತ್ತು. ಇದು ಹಸಿವಿಗೆ ದೂಡಿ ಗಾಝಾದ ಜನರನ್ನು ಸತಾಯಿಸುವ ಯುದ್ಧ ವಿರೋಧಿ ಕ್ರಮವಾಗಿದೆ ಮತ್ತು ಇದನ್ನು ವಿರೋಧಿಸಬೇಕು ಎಂದು ಹಮಾಸ್ ವಕ್ತಾರ ಹಸೀಂ ಖಸ್ಸಾಮ್ ತಿಳಿಸಿದ್ದಾರೆ.

ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮ ಒಪ್ಪಂದದ ಮೊದಲ ಹಂತದ ಅವಧಿ ಮುಗಿದಿದ್ದು ಶಾಶ್ವತ ಕದನ ವಿರಾಮ ಒಪ್ಪಂದಕ್ಕಾಗಿ ದ್ವಿತೀಯ ಹಂತದ ಮಾತುಕತೆಗೆ ಇಸ್ರೇಲ್ ಹಿಂದೇಟು ಹಾಕುತ್ತಿದೆ. ಅದರ ಬದಲು ಮೊದಲ ಹಂತದ ಕದನ ವಿರಾಮವನ್ನು ವಿಸ್ತರಿಸಿ ಬಂಧಿಗಳನ್ನು ಬಿಡುಗಡೆಗೊಳಿಸುವ ತಂತ್ರಕ್ಕೆ ಇಸ್ರೇಲ್ ಮುಂದಾಗಿದೆ. ಈ ಮೂಲಕ ಶಾಶ್ವತ ಕದನ ವಿರಾಮ ಒಪ್ಪಂದ ಏರ್ಪಾಡಾಗದಂತೆ ನೋಡಿಕೊಳ್ಳುವ ಸಂಚು ಹೆಣೆದಿದೆ.

ಈ ಹಿನ್ನೆಲೆಯಲ್ಲಿ ದ್ವಿತೀಯ ಹಂತದ ಶಾಶ್ವತ ಕದನ ವಿರಾಮ ಒಪ್ಪಂದ ಆಗದೆ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸುವುದಿಲ್ಲ ಎಂದು ಹಮಾಸ್ ಹೇಳುತ್ತಿದೆ. ಈ ಹಿನ್ನೆಲೆಯಲ್ಲಿ ಹಮಾಸ್ ನ ಮೇಲೆ ಒತ್ತಡ ಹೇರುವುದಕ್ಕಾಗಿ ಇಂತಹ ಕ್ರೌರ್ಯಕ್ಕೆ ಇಸ್ರೇಲ್ ಮುಂದಾಗಿದೆ ಎಂದು ತಿಳಿದುಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*