ಗಂಗಾ ನದಿಯ ಸ್ವಚ್ಛತೆ ಬಗ್ಗೆ ಪ್ರಶ್ನಿಸಿದ ರಾಜ್ ಠಾಕ್ರೆ

ಭಾಸ್ಕರ ಪತ್ರಿಕೆ
0


ಮಹಾ ಕುಂಭದ ಸಮಯದಲ್ಲಿ ಗಂಗಾ ನದಿಯ ಸ್ವಚ್ಛತೆ ಬಗ್ಗೆ ಪ್ರಶ್ನಿಸಿರುವ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ, ಮಹಾ ಕುಂಭದ ವೇಳೆ ಪಕ್ಷದ ನಾಯಕರೋರ್ವರು ತಂದ ಗಂಗಾ ಜಲವನ್ನು ನಾನು ಮುಟ್ಟಿಯೂ ನೋಡಿಲ್ಲ ಎಂದು ಹೇಳಿದ್ದಾರೆ. ನಾನು ನದಿಯಲ್ಲಿ ಸ್ನಾನ ಮಾಡುವುದಿಲ್ಲ. ಮೂಢ ನಂಬಿಕೆಯಿಂದ ಹೊರಬನ್ನಿ ಮತ್ತು ನಿಮ್ಮ ಬುದ್ದಿಯನ್ನು ಸರಿಯಾಗಿ ಬಳಸಿಕೊಳ್ಳಿ ಎಂದು ಕರೆ ನೀಡಿದ್ದಾರೆ.

ಪಿಂಪ್ರಿ-ಚಿಂಚ್ವಾಡ್ ನಲ್ಲಿ ಎಂಎನ್ಎಸ್ನ 19ನೇ ಸಂಸ್ಥಾಪನಾ ದಿನದ ಅಂಗವಾಗಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮಾತನಾಡಿದ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ, .
ಎಂಎನ್ಎಸ್ ಪಕ್ಷದ ನಾಯಕ ಬಾಲ ನಂದಗಾಂವ್ಕರ್ ಒಮ್ಮೆ ಕುಂಭ ಮೇಳದಿಂದ ಗಂಗಾಜಲವನ್ನು ತಂದು ಕೊಟ್ಟರು. ಅದನ್ನು ನಾನು ಮುಟ್ಟಿಯೂ ನೋಡಲಿಲ್ಲ. ನಾನು ಸ್ನಾನ ಮಾಡಲೇ ಹೋಗಿಲ್ಲ. ಮತ್ತೆ ಆ ನೀರನ್ನು ಯಾರು ಕುಡಿಯುತ್ತಾರೆ? ಎಂದು ಪ್ರಶ್ನಿಸಿದರು.
ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಅಧಿಕಾರಾವಧಿಯಿಂದಲೂ ನದಿಗಳನ್ನು ಸ್ವಚ್ಛಗೊಳಿಸುವ ಬಗ್ಗೆ ಭರವಸೆಗಳನ್ನು ನೀಡಲಾಗಿತ್ತು.

ಸತ್ಯವೆಂದರೆ, ದೇಶದ ಯಾವುದೇ ನದಿ ಸ್ವಚ್ಛವಾಗಿಲ್ಲ. ದೇಶವು ಇದೀಗ ಸಾಂಕ್ರಾಮಿಕ ರೋಗದಿಂದ ಹೊರಬಂದಿದೆ. ಆದರೂ ಜನರು ಕುಂಭ ಮೇಳಕ್ಕೆ ಧಾವಿಸುತ್ತಿದ್ದಾರೆ.
ನಾವು ವಿದೇಶ ಪ್ರವಾಸ ಮಾಡುವಾಗ ಸ್ಫಟಿಕದಂತಹ ಸ್ವಚ್ಛವಾದ ನದಿಗಳನ್ನು ನೋಡುತ್ತೇವೆ. ಆದರೆ, ನಮ್ಮ ದೇಶದಲ್ಲಿ ಎಲ್ಲಾ ಕಲುಷಿತ ನೀರನ್ನು ನದಿಗಳಿಗೆ ಬಿಡಲಾಗುತ್ತದೆ ಎಂದು ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*