ಮಹನೀಯರನ್ನು ಸ್ಮರಿಸುವುದು ಪುಣ್ಯದ ಕೆಲಸ: ಯಮುನಾ ಧರಣೇಶ್

ಭಾಸ್ಕರ ಪತ್ರಿಕೆ
0


ತಿಪಟೂರು: ಸಮಾಜದ  ಒಳಿತಿಗೆ ಶ್ರಮಿಸಿದ  ಹಿರಿಯ ಮಹನೀಯರನ್ನು ಸ್ಮರಿಸುವುದು ಪುಣ್ಯದ ಕೆಲಸ ಎಂದು  ನಗರಸಭೆಯ ಅಧ್ಯಕ್ಷರಾದ ಶ್ರೀಮತಿ ಯಮುನಾ ಧರಣೇಶ್ ತಿಳಿಸಿದರು ಅವರು ತಾಲ್ಲೂಕು ಸವಿತಾ ಸಮಾಜದ ವತಿಯಿಂದ ದಿನಾಂಕ:11-.03-2025 ರ ಮಂಗಳವಾರ ,ಸಂಘದ ಸಮುದಾಯ ಭವನ ದಲ್ಲಿ ಏರ್ಪಡಿಸಿದ್ದ ಶ್ರೀ ಸವಿತಾ ಮರ್ಹಷಿ   ಜಯಂತಿ,ಮತ್ತು ಶ್ರೀ ತ್ಯಾಗರಾಜ ಸ್ವಾಮಿ ಯವರ ಆರಾಧನಾ ಮಹೋತ್ಸವ ಕಾರ್ಯಕ್ರಮದಲ್ಲಿ  ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತ, ನಮ್ಮ ಪೂರ್ವಜರು ಸಮಾಜದ  ಒಳಿತಿಗಾಗಿ ನೀಡಿದ ಮಾರ್ಗದರ್ಶನ ಪಡೆದು ಸಮಾಜದ ಅಭಿವೃದ್ಧಿಗಾಗಿ ಪ್ರತಿಯೊಬ್ಬರು ಶ್ರಮಿಸಬೇಕು, ನಗರಸಭೆಯ ವತಿಯಿಂದ ದೊರೆಯುವ ಸೌಲಭ್ಯವನ್ನು  ಸವಿತಾ ಸಮಾಜ ಕ್ಕೆ ಕೊಡಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ತುಮಕೂರು ಜಿಲ್ಲಾ ಸವಿತಾ ಸಮಾಜದ ಯುವ ಪಡೆಯ ಸಂಸ್ಥಾಪಕ ಅಧ್ಯಕ್ಷ  ಬಿ.ರಂಗನಾಥ್  ಮಾತನಾಡುತ್ತಾ,ಸಂಘಟನೆ ಮೂಲಕ ಹೋರಾಟ ಮಾಡಿದಾಗ ಮಾತ್ರ ಸರ್ಕಾರದ ಸವಲತ್ತು ಪಡೆಯಬಹುದು, ಮನುಷ್ಯನ ಹುಟ್ಟು  ,ಆಕಸ್ಮಿಕ  ಆದರೆ ಸಾವು ಖಚಿತ ಆದ್ದರಿಂದ ನಾವು ಈ ಸಮಾಜದಲ್ಲಿ  ಹುಟ್ಟಿದ ಮೇಲೆ ಒಂದು ಅಳಿಲು ಸೇವೆಯಾದರು ಸಲ್ಲಿಸಿ ನಮ್ಮ ಜನ್ಮ ಪೂಣ್ಯ ಮಾಡಿಕೊಳ್ಳಬೇಕು ಎಂದು ತಿಳಿಸಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ಅಧ್ಯಕ್ಷ ರಾದ ಎ.ಲೋಕೇಶ್ ವಹಿಸಿದ್ದರು

ಕಾರ್ಯಕ್ರಮದಲ್ಲಿ ಸಮುದಾಯ ಭವನದ ಮುಂದುವರೆದ ಕಾಮಗಾರಿಗೆ,ಜಿಲ್ಲಾ ಯುವ ಪಡೆಯ ಜಿಲ್ಲಾಧ್ಯಕ್ಷ ರಂಗನಾಥ್ ,ರೂ 50000/-  ಮತ್ತು ತಾಲ್ಲೂಕು ಯುವ ಪಡೆಯ ಪದಾಧಿಕಾರಿಗಳಿಂದ  ರೂ 50000/- ದೇಣಿಗೆ ನೀಡಿದರು,ಕಾರ್ಯಕ್ರಮದಲ್ಲಿ ಸವಿತಾ ಮರ್ಹಷಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಲಾಯಿತು ಕಾರ್ಯಕ್ರಮದಲ್ಲಿನಗರಸಭೆಯ ಉಪಾಧ್ಯಕ್ಷರಾದ ಶ್ರೀಮತಿ  ಮೇಘಶ್ರೀ ಭೂಷಣ್ ಮಾಜಿ ಅಧ್ಯಕ್ಷ ಟಿ.ಸಿ.ಗೋವಿಂದರಾಜು ,ಮಾಜಿ ಗೌರವಾಧ್ಯಕ್ಷ  ಟಿ.ಎಂ.ವರದರಾಜು, ಮಾಜಿ ಪ್ರಧಾನ ಕಾರ್ಯದರ್ಶಿ ಎಸ್.ಕುಮಾರ್, ಗೌರವ ಕಾರ್ಯದರ್ಶಿ ಎಂ.ಸಿ.ಗೋವಿಂದರಾಜು , ನರಸಿಂಹಯ್ಯ, ಯುವಕ ಸಂಘದ ಮಾಜಿ ಅಧ್ಯಕ್ಷ ಪ್ರಶಾಂತ್ ಬಾಬು *ಸವಿತಾ ಸಮಾಜ ಮುಖಂಡರಾದ  ಶ್ರೀಧರಬಾಬು,  ನವೀನ್ ,ಗೋಪಿ, ರಾಮು , ರಮೇಶ್,ಅನಿಲ್. ನರಸಿಂಹಮೂರ್ತಿ, ಕುಮಾರ್ ,ಸವಿತಾ ಸಮಾಜದ ಯುವ ಘಟಕದ ವರದರಾಜು, ಮಾರುತಿ,ಪ್ರವೀಣ್, ಕಿರಣ್ ಮಹಿಳಾ ಸಂಘದ ಪದಾಧಿಕಾರಿಗಳಾದ, ಚಂದ್ರಕಲಾ,ನಾಗಮಣಿ, ಅನ್ನಪೂರ್ಣ, ಮಂಜುಳ,ರಾಜಮ್ಮ, ಭಾಗ್ಯಮ್ಮ, ತ್ರೀವೇಣಿ, ಕಲಾವಿದರ ಸಂಘದ ಸದಸ್ಯರು, ಗ್ರಾಮೀಣ ಭಾಗದ ಸವಿತಾ ಸಮಾಜದ ಸದಸ್ಯರು ಮತ್ತಿತರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*