ತಿಪಟೂರು: ನಗರದ ಖ್ಯಾತ ವೈದ್ಯರಾದ ಶ್ರೀಧರ್ ರವರು ತಮ್ಮ 51ನೇ ವರ್ಷದ ಹುಟ್ಟುಹಬ್ಬವನ್ನು ತಮ್ಮ ಅಭಿಮಾನಿಗಳ ಸಮ್ಮುಖದಲ್ಲಿ ಇಂದು ಆಚರಿಸಿಕೊಂಡರು. ಇದೇ ಸಂಧರ್ಭದಲ್ಲಿ KERA ತಾಲ್ಲೂಕು ಘಟಕದ ಗೌರವಾಧ್ಯಕ್ಷರಾದ ಡಾ. ಭಾಸ್ಕರ್, ಅಧ್ಯಕ್ಷರಾದ ಗಣೇಶ್, ಪ್ರಧಾನ ಕಾರ್ಯದರ್ಶಿ ಧರಣೇಶ್ ಕುಪ್ಪಾಳು, ಖಜಾಂಚಿ ಶುಭ ವಿಶ್ವಕರ್ಮ ಹಾಗೂ ನಿರ್ದೇಶಕರಾದ ಟಿ. ರಾಜು ಬೆಣ್ಣೇನಹಳ್ಳಿ ಶುಭ ಕೋರಿದರು.
ಈ ವೇಳೆ ಡಾ.ವಿವೇಚನ್, ಡಾ.ಮಿರಾ ಶ್ರೀಧರ್, ಜಿಲ್ಲಾ ಕಾಂಗ್ರೆಸ್ ಪಕ್ಷದ ಯುವ ಘಟಕದ ಅಧ್ಯಕ್ಷ ನಿಖಿಲ್ ರಾಜಣ್ಣ, ವಿಜಯಕುಮಾರ್, ವೊಡಾಪೋನ್ ಚಂದ್ರು, ರಮೇಶ್, ಗುರುಗದಹಳ್ಳಿ ರಾಜು, ಕೆಇಬಿತೊಂಟಿ, ಲಿಖಿತ್, ಶಶಿ, ಅನಗೊಂಡನಹಳ್ಳಿ ಅಶೋಕ್ ಮತ್ತಿತರರು ಇದ್ದರು.
