ಮಾ.16 ರಿಂದ ಹುಲಿಯೂರಮ್ಮ ಜಾತ್ರಾ ಮಹೋತ್ಸವ

ಭಾಸ್ಕರ ಪತ್ರಿಕೆ
0

ತುಮಕೂರು:  ಜಿಲ್ಲೆಯ ಕುಣಿಗಲ್ ತಾಲ್ಲೂಕು ಹುಲಿಯೂರುದುರ್ಗ ಹೋಬಳಿ ಹಳೇವೂರು ಗ್ರಾಮದ ಶ್ರೀ ಹುಲಿಯೂರಮ್ಮ ದೇವಾಲಯದ ಜಾತ್ರಾ ಮಹೋತ್ಸವವು ಮಾರ್ಚ್ 16 ರಿಂದ 21ರವರೆಗೆ ನಡೆಯಲಿದೆ.

ಜಾತ್ರೆ ಅಂಗವಾಗಿ ಮಾ.16ರಂದು ಬೆಳಿಗ್ಗೆ 6 ಗಂಟೆಗೆ ಹೊನ್ನಾರು, ರಾತ್ರಿ 9 ಗಂಟೆಗೆ ಅರಮನೆ ಆರತಿ; ಮಾ.17ರಂದು ಮಧ್ಯಾಹ್ನ ಕುರ್ಜಿನ ಉತ್ಸವ, ರಾತ್ರಿ ಘಟೆ ಉತ್ಸವ, ಸೂರ್ಯಮಂಡಲೋತ್ಸವ, ದೇವರ ಉತ್ಸವ, ಹುಯಿಲ್ ಬಂಡಿ ಉತ್ಸವ; ಮಾ.18ರಂದು ಬೆಳಿಗ್ಗೆ ಅಗ್ನಿಕೊಂಡೋತ್ಸವ, ಸಂಜೆ ರಥೋತ್ಸವ, ಅರವಂಟಿಕೆ ಹಾಗೂ ಪಲ್ಲಕ್ಕಿ ಉತ್ಸವ; ಮಾ.19ರಂದು ಕುದುರೆ ವಾಹನೋತ್ಸವ; ಮಾ. 20ರಂದು ಹುಲಿ ವಾಹನೋತ್ಸವ; ಮಾ.21ರಂದು ಮಧ್ಯಾಹ್ನ ಉಯ್ಯಾಲೋತ್ಸವ, ಸಂಜೆ ತೆಪ್ಪೋತ್ಸವ, ಅರವಂಟಿಕೆ ಮತ್ತು ಕಂಭ ವಿಸರ್ಜನೆ ಕಾರ್ಯಕ್ರಮಗಳು ಜರುಗಲಿವೆ.

ಈ ಜಾತ್ರಾ ಮಹೋತ್ಸವಕ್ಕೆ ಹೆಚ್ಚಿನ ಭಕ್ತಾದಿಗಳು ಆಗಮಿಸಿ ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸುವ ಮೂಲಕ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*