ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ) ವತಿಯಿಂದ "ಅನುಭವಿಗಳೊಂದಿಗೆ ಅನುಭಾವ" ಸಂವಾದ ಕಾರ್ಯಕ್ರಮ

ಭಾಸ್ಕರ ಪತ್ರಿಕೆ
0

ತಿಪಟೂರುಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ) ತಾಲ್ಲೂಕು ಘಟಕದ ವತಿಯಿಂದ ಇಂದು ಸಂಜೆ 07.30 ಗಂಟೆಗೆ ನಗರದ ಕೋಡಿ ಸರ್ಕಲ್‌,  ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರವಿರುವ ಶಾರದ ಚಾರಿಟಬಲ್ ಟ್ರಸ್ಟ್, ಹಿರಿಯರ ಮನೆಯಲ್ಲಿ ರಾಜ್ಯಾಧ್ಯಕ್ಷರಾದ ಕೊಟ್ರೇಶ್ ಎಸ್. ಉಪ್ಪಾರ್ ಹಾಗೂ ಜಿಲ್ಲಾಧ್ಯಕ್ಷರಾದ  ಡಾ. ವಿಜಯಕುಮಾರ ಕಮ್ಮಾರ ಇವರುಗಳ ನೇತೃತ್ವದಲ್ಲಿ "ಅನುಭವಿಗಳೊಂದಿಗೆ ಅನುಭಾವ" ಸಂವಾದ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮದ ಅಧ್ಯಕ್ಷತೆ

  • ಲತಾಮಣಿ ಎಂ. ಕೆ. ತುರುವೇಕೆರೆ, ಅಧ್ಯಕ್ಷರು, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ತಿಪಟೂರು.
ಪ್ರಧಾನ ನಿರ್ವಹಣೆ
  • ಶಿಲ್ಪಾ ಎನ್. ಕಾರ್ಯದರ್ಶಿ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ತಿಪಟೂರು.
ಮುಖ್ಯ ಅತಿಥಿಗಳು
  • ಸುಬೇದಾರ್ ಚಂದ್ರಶೇಖರಪ್ಪ ಎಸ್. ಎಂ ನಿವೃತ್ತ ಯೋಧರು, ಭಾರತೀಯ ಸೇನೆ. 
  • ಡಾ. ಭಾಸ್ಕರಾಚಾರ್, ಪತ್ರಕರ್ತರು ಹಾಗೂ ಸಮಾಜ ಸೇವಕರು, ತಿಪಟೂರು
ಕಾರ್ಯಕ್ರಮ ನಿರ್ವಹಣೆ
  • ರಂಜಿತ ಆನಂದ್ 
  • ಪೂಜಾ. ಜಿ, 
  • ಕುಸುಮ ಕೆ.ಜೆ ಮಾಡಲಿದ್ದಾರೆ
ಈ ಕಾರ್ಯಕ್ರಮಕ್ಕೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಯಶಸ್ವಿಗೊಳಿಸಬೇಕಾಗಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ) ತಾಲ್ಲೂಕು ಘಟಕದ ಸರ್ವ ಸದಸ್ಯರು ಕೋರಿದ್ದಾರೆ.

ಜಾಹಿರಾತು:

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*