ರಾಜ್ಯ ಸರ್ಕಾರದ ಕುಬೇರ ಏಳು ಅಧಿಕಾರಿಗಳು ಮತ್ತು ಒಬ್ಬ ನಿವೃತ್ತ ಅಧಿಕಾರಿ ಮನೆಮೇಲೆ ಮೊನ್ನೆಯ ಲೋಕಾ ದಾಳಿಯಲ್ಲಿ ₹21.05 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ

ಭಾಸ್ಕರ ಪತ್ರಿಕೆ
0


ಬೆಂಗಳೂರು: ಲೋಕಾಯುಕ್ತ ಪೊಲೀಸರು ಮೊನ್ನೆ ರಾಜ್ಯದ ಹಲವೆಡೆ ಏಕಕಾಲಕ್ಕೆ ನಡೆಸಿದ ಸರ್ಕಾರದ ವಿವಿಧ ಇಲಾಖೆಗಳ ಏಳು ಅಧಿಕಾರಿಗಳು ಮತ್ತು ಒಬ್ಬ ನಿವೃತ್ತ ಅಧಿಕಾರಿಗೆ ಸಂಬಂಧಿಸಿದ ಮನೆ ಹಾಗೂ ಇತರ ಸ್ವತ್ತುಗಳ ಮೇಲಿನ ದಾಳಿಯಲ್ಲಿ ಒಟ್ಟು ₹21.05 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಮಾಡಿದ್ದಾರೆ.

ಘೋಷಿತ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಆರೋಪದ ಸಂಬಂಧ ಬೆಂಗಳೂರು ನಗರ, ತುಮಕೂರು, ಗದಗ, ಬೀದರ್‌, ಚಿಕ್ಕಮಗಳೂರು, ಬಳ್ಳಾರಿ, ಬೆಳಗಾವಿ ಮತ್ತು ರಾಯಚೂರಿನ 38 ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರ ತಂಡವು ಬುಧವಾರ ಬೆಳಿಗ್ಗೆಯೇ ದಾಳಿ ನಡೆಸಿತ್ತು, ಯಲಹಂಕ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ರಿಟೈರ್ಡ್‌ ಅಧಿಕಾರಿ ತುಮಕೂರಿನ ಎಸ್‌.ರಾಜು ಮತ್ತು ಅವರ ಆಪ್ತ ಡಿ.ಎನ್‌.ಸತೀಶ್ ಅವರ ಮನೆ ಹಾಗೂ ಕಚೇರಿಗಳ ಮೇಲೂ ದಾಳಿ ನಡೆಸಲಾಗಿತ್ತು.

ರಾಜ್ಯದಲ್ಲಿ ಬುಧವಾರ ನಡೆಸಲಾದ ದಾಳಿಯಲ್ಲಿ:

  1.  ತುಮಕೂರಿನ  ಎಸ್.ರಾಜು ಅವರ ಬಳಿಯೇ ಅತಿಹೆಚ್ಚು ಅಕ್ರಮ ಆಸ್ತಿ (₹5.02 ಕೋಟಿ) ಪತ್ತೆಯಾಗಿದೆ ಎಂದು ಲೋಕಾಯುಕ್ತ ಪ್ರಕಟಣೆ ತಿಳಿಸಿದೆ
  2. ಆರ್‌.ಎಚ್‌.ಲೋಕೇಶ್‌, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ,ಬಳ್ಳಾರಿ 6 ಎಕರೆ ಕೃಷಿ ಜಮೀನು, 2 ನಿವೇಶನ, 1 ಮನೆ ಸೇರಿ ₹1.46 ಕೋಟಿ ಮೌಲ್ಯದ ಸ್ಥಿರಾಸ್ತಿ ₹7.79 ಲಕ್ಷ ಮೌಲ್ಯದ ಚಿನ್ನಾಭರಣ, ₹33.21 ಲಕ್ಷದ ಗೃಹೋಪಯೋಗಿ ವಸ್ತುಗಳು, ₹9,100 ನಗದು ಮತ್ತು ₹16.50 ಲಕ್ಷ ಮೌಲ್ಯದ ವಾಹನಗಳು, ಆಸ್ತಿಯ ಒಟ್ಟು ಮೌಲ್ಯ: ₹2.03 ಕೋಟಿ
  3. ಹುಚ್ಚಪ್ಪ ಎ ಬಂಡಿವಡ್ಡರ್, ಎಇಇ, ಪುರಸಭೆ, ಗದಗ 1 ನಿವೇಶನ, 2 ಮನೆ, 1 ವಾಣಿಜ್ಯ ಸಂಕೀರ್ಣ ಸೇರಿ ₹76.50 ಲಕ್ಷ ಮೌಲ್ಯದ ಸ್ಥಿರಾಸ್ತಿ ₹18.91 ಲಕ್ಷ ಮೌಲ್ಯದ ಚಿನ್ನಾಭರಣ, ₹21.01 ಲಕ್ಷ ಠೇವಣಿ, ₹33.21 ಲಕ್ಷದ ಗೃಹೋಪಯೋಗಿ ವಸ್ತುಗಳು, ₹43,970 ನಗದು ಮತ್ತು ₹42.10 ಲಕ್ಷ ಮೌಲ್ಯದ ವಾಹನಗಳು, ಆಸ್ತಿಯ ಒಟ್ಟು ಮೌಲ್ಯ: ₹1.58 ಕೋಟಿ
  4. ಹುಲಿರಾಜ್ @ ಹುಲುಗಪ್ಪ, ಕಿರಿಯ ಎಂಜಿನಿಯರ್‌, ಜೆಸ್ಕಾಂ, ಗಿಲ್ಲೆಸೂಗೂರು, ರಾಯಚೂರು 24 ಎಕರೆ ಕೃಷಿ ಜಮೀನು, 3 ನಿವೇಶನ, 2 ಮನೆ ಸೇರಿ ₹1.20 ಕೋಟಿ ಮೌಲ್ಯದ ಸ್ಥಿರಾಸ್ತಿ ₹13,500 ಮೌಲ್ಯದ ಚಿನ್ನಾಭರಣ, ₹4.35 ಲಕ್ಷದ ಗೃಹೋಪಯೋಗಿ ವಸ್ತುಗಳು, ₹90,000 ನಗದು ಮತ್ತು ₹12.50 ಲಕ್ಷ ಮೌಲ್ಯದ ವಾಹನಗಳುಆಸ್ತಿಯ ಒಟ್ಟು ಮೌಲ್ಯ: ₹1.38 ಕೋಟಿ
  5. ಎಸ್‌.ಎನ್‌.ಉಮೇಶ್‌, ತಾಲ್ಲೂಕು ಆರೋಗ್ಯಾಧಿಕಾರಿ, ಕಡೂರು, ಚಿಕ್ಕಮಗಳೂರು, 8 ಎಕರೆ ಕೃಷಿ ಜಮೀನು, 2 ನಿವೇಶನ, 1 ಮನೆ ಸೇರಿ ₹56.78 ಲಕ್ಷ ಮೌಲ್ಯದ ಸ್ಥಿರಾಸ್ತಿ ₹12.50 ಲಕ್ಷ ಮೌಲ್ಯದ ಚಿನ್ನಾಭರಣ, ₹10 ಲಕ್ಷದ ಗೃಹೋಪಯೋಗಿ ವಸ್ತುಗಳು, ₹8,430 ನಗದು ಮತ್ತು ₹45.83 ಲಕ್ಷ ಮೌಲ್ಯದ ವಾಹನಗಳು!ಆಸ್ತಿಯ ಒಟ್ಟು ಮೌಲ್ಯ: ₹1.25 ಕೋಟಿ
ಇಷ್ಟರಲ್ಲೇಭೂಮಾಪನ, ಉಪನೊಂದಣಿ, ಕಾರ್ಪೋರೇಷನ್‌, ಕೆಐಎಡಿಬಿ, ಶಿಕ್ಷಣ ಇಲಾಖೆ, ಆರ್‌ಟಿಓ, ಗಣಿ, ಆಹಾರ ಇಲಾಖೆಯ ಒಂದಿಷ್ಟು ಕರುನಾಡ ಕುಬೇರರ,ಭ್ರಷ್ಟರ ಬಗ್ಗೆ ಭಾಸ್ಕರ ಪತ್ರಿಕೆ ಅನಾವರಣ ಮಾಡಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*