ದ್ವಿತೀಯ ಪಿಯುಸಿ ಪರೀಕ್ಷೆ : 138 ವಿದ್ಯಾರ್ಥಿ ಗೈರು

ಭಾಸ್ಕರ ಪತ್ರಿಕೆ
0


ತುಮಕೂರು:  ಜಿಲ್ಲೆಯಲ್ಲಿ ಮಾ.12ರಂದು ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ–1ರ ಮನಃಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಮೂಲಗಣಿತ ವಿಷಯದಲ್ಲಿ ಒಟ್ಟು 138 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಪನಿರ್ದೇಶಕ ಬಾಲಗುರುಮೂರ್ತಿ ತಿಳಿಸಿದ್ದಾರೆ.

ಮನಃಶಾಸ್ತ್ರ ವಿಷಯಕ್ಕೆ ಒಟ್ಟು 67, ರಸಾಯನಶಾಸ್ತ್ರ ವಿಷಯಕ್ಕೆ 10342 ಹಾಗೂ ಮೂಲಗಣಿತ ವಿಷಯಕ್ಕೆ ಒಟ್ಟು 203 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಈ ಪೈಕಿ ರಸಾಯನ ಶಾಸ್ತ್ರದಲ್ಲಿ 137 ಹಾಗೂ ಮೂಲಗಣಿತ ವಿಷಯದಲ್ಲಿ 1 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*