ತಿಪಟೂರು: ವಿಶ್ವಕರ್ಮ ಸಮಾವೇಶದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ, ಕೆಪಿಸಿಸಿ ರಾಜ್ಯ ಕಾರ್ಯದರ್ಶಿ, ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜದ ಮಹಿಳಾ ವಿಭಾಗದ ರಾಜ್ಯಾಧ್ಯಕ್ಷರು, ನಮ್ಮ ಕರ್ನಾಟಕ ಅಹಿಂದ ಜನಪರ ವೇದಿಕೆಯ ಮಹಿಳಾ ವಿಭಾಗದ ರಾಜ್ಯ ಅಧ್ಯಕ್ಷರಾದ ಡಾ.ವಸಂತ ಮುರಳಿ ಆಚಾರ್ ಅವರಿಗೆ ಅಭಿನಂದನ ಸಮಾರಂಭವನ್ನು ನಗರದ ಕಲ್ಪತರು ಗ್ಯಾಂಡ್ ಹೋಟೆಲ್ ನಲ್ಲಿ ಏರ್ಪಡಿಸಲಾಗಿತ್ತು.
ಅಭಿನಂದನಾ ಸಮಾರಂಭದಲ್ಲಿ ಚಿಕ್ಕಬಳ್ಳಾಪುರ ಧ್ಯಾನ ಯೋಗಾಶ್ರಮದ ಮಹೇಶ್ವರ ಆನಂದ ಗುರೂಜಿ, ಲಕ್ಷ್ಮೀ ಬಡಿಗೇರ್, ಕರ್ನಾಟಕ ವಿಶ್ವಕರ್ಮ ಜನ ಸೇವಾ ಸಂಘದ ಪ್ರಚಾರ ಸಮಿತಿ ಅಧ್ಯಕ್ಷರಾದ ಡಾ. ಭಾಸ್ಕರ್, ಪರಮೇಶಾಚಾರ್, ದೇವೇಂದ್ರ ಆಚಾರ್, ರೂಢಾಚಾರ್, ಸತೀಶ್ ಮುಳ್ಳೂರು, ಸರ್ವೇಶ್, ಧರಣೇಶ್ ಕುಪ್ಪಾಳು, ರಾಜು ಬೆಣ್ಣೇನಹಳ್ಳಿ ಹಾಗೂ ಭಾಸ್ಕರ್ ಬಡಿಗೇರ್ ಮತ್ತಿತರರು ಇದ್ದರು.
