ತಿಪಟೂರು: ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ ಮಾರುಗೊಂಡನಹಳ್ಳಿ ಗ್ರಾಮದ ಜಮೀನು ಒಂದರಲ್ಲಿ ಅನುಮಾನಾಸ್ಪದವಾಗಿ ವ್ಯಕ್ತಿಯೋರ್ವನ ಶವಪತ್ತೆಯಾಗಿದ್ದು,ಯುವಕನ ಸಾವಿನ ಬಗ್ಗೆ ಗ್ರಾಮಸ್ಥರು ಸಂಶಯ ವ್ಯಕ್ತಪಡಿಸಿದ್ದಾರೆ.
ತಾಲ್ಲೂಕಿನ ಮಾರುಗೊಂಡನಹಳ್ಳಿ ವಾಸಿ ಬಸವರಾಜು 35ವರ್ಷ ಮೃತ ದುರ್ದೈವಿ ಎಂದು ಗುರ್ತಿಸಲಾಗಿದೆ. ಮೃತ ಯುವಕನ ಮೇಲೆ ಸುಟ್ಟ ಬೊಬ್ಬೆಗಾಯಗಳಾಗಿದ್ದು, ದೇಹ ಸಂಪೂರ್ಣ ಕಪ್ಪು ಬಣ್ಣಕ್ಕೆ ತಿರುಗಿರುವುದು, ಸಾವಿನ ಬಗ್ಗೆ ಅನುಮಾನ ಮೂಡಲು ಕಾರಣವಾಗಿದೆ, ಹೊನ್ನವಳ್ಳಿ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ದೇಹವನ್ನು ತಿಪಟೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ನಂತರ ಮೃತರ ಪೋಷಕರಿಗೆ ಹಸ್ತಾಂತರಿಸಿದ್ದು ಮೃತರ ಸಹೋದರ ರಂಗಸ್ವಾಮಿ ಮಾತನಾಡಿ ಬಸವರಾಜು ಮೃತಪಟ್ಟಿರು ರೀತಿ ಗಮನಿಸಿದರೆ ಹಲವಾರು ಅನುಮಾನಗಳು ಮೂಡುತ್ತವೆ.ದೇಹ
ಸಂಪೂರ್ಣವಾಗಿ ಕಪ್ಪಾಗಿದೆ, ಮೈ ಮೇಲೆ ಬಟ್ಟೆಧರಿಸಿದರು,ದೇಹದ ಮೇಲೆ ಗಾಯಗಳಾಗಿವೆ, ಸಾವಿನಸುತ್ತ ಹಲವಾರು ಅನುಮಾನಗಳು ಮೂಡಿದ್ದು, ಸೂಕ್ತ ತನಿಖೆ ನಡೆಸಬೇಕು ಎಂದು ತಿಳಿಸಿದರು.


