ಏಪ್ರಿಲ್ 20 ರಂದು ಟೈಲರಿಂಗ್ ಮಷೀನ್ ವಿತರಣೆ

ಭಾಸ್ಕರ ಪತ್ರಿಕೆ
0

 

ಮೈಸೂರು: ಜಿಲ್ಲಾ ವಿಶ್ವಕರ್ಮ ಹಿರಿಯ ಮುಖಂಡರುಗಳ ಅಧ್ಯಕ್ಷತೆಯಲ್ಲಿ ಹಾಗೂ ಅಖಿಲ ಕರ್ನಾಟಕ ವಿಶ್ವಕರ್ಮ ಯುವ ಬ್ರಿಗೇಡ್ ಮತ್ತು ಮೈಸೂರು ಜಿಲ್ಲೆಯ ಎಲ್ಲಾ ವಿಶ್ವಕರ್ಮ ಸಂಘಟನೆಯ ಸಹಯೋಗದೊಂದಿಗೆ ವಿಶ್ವಕರ್ಮ ಸಮಾಜದ ಸಾಧಕರಿಗೆ ಹಾಗೂ ಹಿರಿಯ ಮುಖಂಡರಿಗೆ ಏಪ್ರಿಲ್ 20ನೇ ತಾರೀಕಿನಂದು ವಿಶ್ವಕರ್ಮ ಸಮಾಜದ ಬಂಧುಗಳಿಗೆ ಟೂಲ್ಸ್ ವಿತರಣೆ ಹಾಗೂ ಮಹಿಳೆಯರ ಬಲವರ್ಧನೆಗಾಗಿ ಟೈಲರಿಂಗ್ ಮಷೀನ್ ವಿತರಣಾ ಸಮಾರಂಭವನ್ನು ಮತ್ತು ರಾಜಕೀಯವಾಗಿ ಶಕ್ತಿ ತುಂಬವ ಕೆಲಸವನ್ನು ಸಮಾಜದ ಬಂಧುಗಳಿಗಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹಾಗಾಗಿ ಇಂದು ಸಮುದಾಯದ ಮುಖಂಡರೆಲ್ಲಾ ಸೇರಿ ಐಡಿಯಲ್ ಜಾವಾ ರೋಟರಿ ಕ್ಲಬ್ಬ, ಝಾನ್ಸಿ ಲಕ್ಷ್ಮೀಬಾಯಿ ರಸ್ತೆಯಲ್ಲಿ ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಂಡಿದ್ದರು 

ಈ ಕಾರ್ಯಕ್ರಮವು ಶ್ರೀಮತಿ ವಸಂತ ಮುರಳಿ ಆಚಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು ನಗರದ ಕಲಾಮಂದಿರದಲ್ಲಿ ನಡೆಯಲಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೆರವೇರಿಸುವರು ಅಲ್ಲದೆ ಅದೇ ವೇದಿಕೆಯಲ್ಲಿ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಸೇರಿದಂತೆ ಅನೇಕ ಶಾಸಕರು ಸಮಾಜದ ಮುಖಂಡರು ಬಂಧುಗಳು ಭಾಗವಹಿಸಲಿದ್ದು ಈ ಮೂಲಕ ನಮ್ಮ ಸಮುದಾಯದ ಏಳಿಗೆಗಾಗಿ ಹಾಗೂ ರಾಜಕೀಯವಾಗಿ ವಂಚಿತವಾಗಿರುವ ನಮಗೆ ಮುಂದಿನ ದಿನಗಳಲ್ಲಿ ಬರುವ ಚುನಾವಣೆಗಳಲ್ಲಿ ನಮ್ಮ ಮುಖಂಡರುಗಳಿಗೂ ಗೆಲ್ಲುವ ಅರ್ಹತೆ ಇದೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಮಗೂ ಪ್ರಾತಿನಿಧ್ಯ ನೀಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ಮಾಧ್ಯಮಗಳ ಜೊತೆ ವಿಶ್ವಕರ್ಮ ಸಮುದಾಯದ ಮುಖಂಡರಾದ ಸಿದ್ದಪ್ಪಾಜಿ ವಿಶ್ವಕರ್ಮ ರವರು ಮಾತನಾಡಿದರು ಇದೇ ವೇಳೆ ವಿಶ್ವಕರ್ಮ ಸಮುದಾಯದ ಮುಖಂಡರುಗಳಾದ ನಾಗೇಂದ್ರ, ಶಿವಲಿಂಗಪ್ಪ, ವಿಜಿ, ಸ್ವಾಮಿ ಸೇರಿದಂತೆ ಹಲವರು ಉಪಸಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*